ಮಂಜೇಶ್ವರ ಫೆಬ್ರವರಿ ೨೮ : "ಹೆದ್ದಾರಿ ಮಾರದಿರಿ ಅಭಿವೃದ್ದಿಗೊಳಿಸಿ" ಎಂಬ ಪ್ರಮೇಯದೊಂದಿಗೆ ಸಾಲಿಡಾರಿಟಿ ರಾಜ್ಯಾಧ್ಯಕ್ಷ ಪಿ.ಮುಜೀಬ್ ರಹ್ಮಾನ್ ನೇತೃತ್ವದ ಸಮರ ಜಾಥಾಕ್ಕೆ ಕುಂಜತ್ತೂರು ಮಾಡದಲ್ಲಿ ಇಂದು ಚಾಲನೆ ದೊರೆಯಿತು. ಜಮಾಅತೆ ಇಸ್ಲಾಮಿ ಜಿಲ್ಲಾ ಕಾರ್ಯದರ್ಶಿ ಸಿ.ಎ ಮೊಯ್ದೀನ್ ಜಾಥಾ ನಾಯಕ ಸಾಲಿಡಾರಿಟಿ ರಾಜ್ಯಾಧ್ಯಕ್ಷ ಪಿ.ಮುಜೀಬ್ ರಹ್ಮಾನ್ ಗೆ ದ್ವಜ ಹಸ್ತಾಂತರಿಸಿ ಉದ್ಗಾಟಿಸಿದರು. ರಝಾಕ್ ಅಧ್ಯಕ್ಷತೆವಹಿಸಿದರು.
ನಂತರ ಮಾತನಾಡಿದ ಅವರು ಬಿ.ಓ.ಟಿ ಮಾದರಿಯಲ್ಲಿ ಹೆದ್ದಾರಿ ಅಭಿವೃದ್ದಿ ಮಾಡೂವುದರಿಂದ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರಗಳು ಖಾಸಗಿ ಕಂಪೆನಿಗಳಿಗೆ ಹಾಗೂ ವೆಕ್ತಿಗಳು ಹಣವನ್ನು ಕೊಳ್ಳೆ ಹೊಡೆಯಲು ಕುಮ್ಮಕ್ಕು ನೀಡುವಂತಾಗಿದೆ. ಹೆದ್ದಾರಿ ಅಭಿವೃದ್ದಿಯನ್ನು ರಾಜ್ಯದ ಖಜಾನೆಯಿಂದಲೇ ವ್ಯಯಿಸಿ ಮಾಡಬೇಕು ಅಲ್ಲದೇ ಬಿ.ಓ.ಟಿ ಮಾದರಿಯಲ್ಲಿ ಅಭಿವೃದ್ದಿ ಮಾಡಿದಲ್ಲಿ ಖಾಸಗಿ ವೆಕ್ತಿಗಳು ಹೆದ್ದಾರಿಯನ್ನು ನಿಯಂತ್ರಿಸುವಂತಹಾ ಪರಸ್ತಿತಿ ಬರಬಹುದೆಂದರು. ಟಿ.ಪಿ ಮುಹಮ್ಮದ್ ಶಮೀಮ್ ಸಾಹಿಬ್ , ಸಜೀರ್ ಕೊಲ್ಲಂ, ಕೆ.ಕೆ ಸುರೇಶ್, ಮುಬೀನ್ ಉಳ್ಲಾಲ್, ಮೊದಲಾದವರು ಮಾತನಾಡಿದರು. ಜಾಥಾವು ಮಾರ್ಚ್ ೫ ರಂದು ತ್ರಿಶೂರಿನಲ್ಲಿ ಸಮಾಪ್ತಿಗೊಳ್ಲಲಿದೆ.
ಚಿತ್ರ, ವರದಿ: ಆರಿಫ್ ಮಂಜೇಶ್ವರ